ಅಗ್ನಿ ಮತ್ತು ಮಳೆ: ರಮೇಶ್ ಒಬ್ಬ perfect ನಿರ್ದೇಶಕ

ದೀರ್ಘಕಾಲ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಮಂಡ್ಯ ರಮೇಶ್.’ನಟನ’ರಂಗ ಪ್ರಯೋಗಶಾಲೆಯಿ೦ದ ರಂಗಶಂಕರದಲ್ಲಿ ಇತ್ತೀಚಿಗೆ ಶ್ರೇಷ್ಠ ನಾಟಕಕಾರ ಗಿರೀಶ ಕಾರ್ನಾಡರ “ಅಗ್ನಿ ಮತ್ತು ಮಳೆ” ನಾಟಕ ಆಯೋಜಿಸಿದ್ದರು.

ಮಹಾಭಾರತದ ವನಪರ್ವದಲ್ಲಿ ಬರುವ ಅಧ್ಯಾಯಗಳಲ್ಲಿ ಈ ಸನ್ನಿವೇಶ ಸೃಷ್ಟಿಯಾಗಿದೆ.ಇಂದ್ರನನ್ನು ಒಲಿಸಿಕೊಳ್ಳಲು ತಪಸ್ಸಿಗೆ ಹೋಗುವ ಯಾವಕ್ರೀತ, ಪರ್ಜನ್ಯ ಯಾಗ ಮಾಡುವ ಪರಾವಸು,ಅತ್ಯಂತ ಜ್ಞಾನಿಯಾದ ರೆಭ್ಯ ಈ ನಾಟಕದ ಕೇಂದ್ರಬಿಂದುಗಳು..ಅದಕ್ಕೆ ಹೊಂದಿಕೊಂಡಂತೆ ಬರುವ ಪಾತ್ರಗಳು ಅರವಸು (ಪರಾವಸುವಿನ ತಮ್ಮ), ನಿತ್ತಿಲೆ (ಅರವಸುವಿನ ಪ್ರೇಮಿ), ವಿಶಾಖ (ಪರಾವಸುವಿನ ಹೆಂಡತಿ), ಜಾತಿಗಾರ ಹಾಗು ಬ್ರಹ್ಮ ರಾಕ್ಷಸರದ್ದು.

ವ್ರತಗಳ ಗೊಂದಲ,ವಿಚಾರಗಳ ವ್ಯರ್ಥ ಹುಡುಕಾಟ,ವಿರಹಗಳ ನಡುವೆ ಕಾಲು ಚಾಚಿ ಕೂತ ಖಾಲಿ ಜಾಗಗಳು,ಗೋಚರ ಹಾಗು ಅಗೋಚರವಾದ ವರ್ತುಲ, ಮಳೆ ಹನಿಗಳಿಗಾಗಿ ಹಾತೊರೆಯುವ ಜೀವಗಳು,ಹನಿಯೊಂದನ್ನು ತನ್ನ ವಾತಾವರಣದಲ್ಲಿ ಸೃಷ್ಟಿಸಲು ಒಬ್ಬಾಕೆ ನಡೆಸಿದ ಕಾಯ…ಇದು ನಾಟಕದ ದಿವ್ಯ ಸಾರಾಂಶ.

ಯಾರೋ ಒಬ್ಬ ನಾಟಕ ಮಾಡಲು ಪುರವಸುವಿನ ಅಪ್ಪಣೆ ಕೇಳಲು ಬರುತ್ತಾನೆ, ಅದರಲ್ಲಿ ಅರವಸು ಕೂಡ ಪಾಲ್ಗೊಳ್ಳಲು ಅನುಮತಿಗಾಗಿ ಭಿನ್ನವ ಕೇಳುವ ಮೂಲಕ ನಾಟಕ ಶುರುವಾಗುತ್ತದೆ.ಒಂಥರಾ ನಾಟಕದಲ್ಲಿ ಇನ್ನೊಂದು ನಾಟಕದ ಸನ್ನಿವೇಶ. ಪರಾವಸುವಿನ ಹೆಂಡತಿ ವಿಶಾಖ ಅವಳ ಮಾವನಾದ ರೆಭ್ಯ ಮುನಿಯ ಹಿಂಸೆ ಶೋಷಣೆ ತಾಳಲಾರದೆ,ಯಾವಕ್ರಿಯ ಜೊತೆ ಮಲಗಿ ಭೋಗಿಸುತ್ತಾಳೆ,ಇದನ್ನು ಅರಿತ ರೆಭ್ಯ ಮುನಿ…ಯಾವಕ್ರಿತ ಬ್ರಹ್ಮ ರಾಕ್ಷಸನ ಕೈ ಇಂದ ಮೃತನಾಗುವಂತೆ ಶಾಪ ಕೊಡುತಾನೆ,ಇದನ್ನು ತಿಳಿಸಲು ವಿಶಾಖ ಯಾವಕ್ರಿಯ ಬಳಿ ಓಡುತ್ತಾಳೆ,ಹೋಗಿ ಅವನ ತಂದೆಯ ಆಶ್ರಮದಲ್ಲಿ ಅಡಗಿಕೊಳ್ಳಲು ಹೇಳುತ್ತಾಳೆ,ಇದೆಲ್ಲ ಮೊದಲೇ ತನ್ನ ಜ್ಞಾನದಿಂದ ತಿಳಿದ ಯಾವಕ್ರೀತ ದಿವ್ಯ ಜಲವನ್ನು ಮಂತ್ರಿಸಿ ಇಟ್ಟುಕೊಳ್ಳುತ್ತಾನೆ,ಅವನು ಅಡಗಿಕೊಳ್ಳಲಿ ಎನ್ನುವ ಅಭದ್ರತೆಯಿಂದ ವಿಶಾಖ ಆ ಜಲವನ್ನು ಚಲ್ಲಿಬಿಡುತ್ತಾಳೆ,ಆಮೇಲೆ ಬ್ರಹ್ಮ ರಾಕ್ಷಸ ಯಾವಕ್ರೀತನನ್ನು ಕೊಂದುಬಿಡುತ್ತದೆ,

ವಿಷಯವನ್ನು ತಿಳಿದ ಪರಾವಸು ಯಾಗವನ್ನು ಬಿಟ್ಟು ಯಾರಿಗೂ ತಿಳಿಯದಂತೆ ಹೆಂಡತಿಯನ್ನು ಕಾಣಲು ಬರುತ್ತಾನೆ,ಆಗ ಹೆಂಡತಿಯಾದ ವಿಶಾಖಳಿಂದ ವಾಸ್ತವ್ಯ ಅರಿತ ಅವನು ತನ್ನ್ನ ತಂದೆಯನ್ನು ಕೊಲ್ಲುತ್ತಾನೆ.ಇತ್ತಕಡೆ ಪರಾವಸುವಿನ ತಮ್ಮ ಅರವಸು ಕಾಡಿನ ಸುಂದರಿ ನಿತ್ತಿಲೆಯನ್ನು ಪ್ರೀತಿಸುತ್ತಿರುತ್ತಾನೆ,ನಿತ್ತಿಲೆಯ ತಂದೆಯ ಬಳಿ ಹೋಗಿ ಅವರ ಮದುವೆಯ ಬಗ್ಗೆ ಪ್ರಸ್ತಾಪ ಮಾಡಿ ಅವಳ ಕೈ ಹಿಡಿಯಬೇಕು ಎನ್ನುವ ವೇಳೆಗೆ ಅಣ್ಣ ತನ್ನ ಕೈ ಇಂದ ಹತನಾದ ರೆಭ್ಯಮುನಿಯ ಸಂಸ್ಕಾರ ಮಾಡಬೇಕಾಗಿ ಅಪ್ಪಣೆ ಮಾಡುತ್ತಾನೆ,ಆದ ಕಾರಣದಿಂದಾಗಿ ನಿತ್ತಿಲೆಯ ತಂದೆಯ ಒಡನಾಟ ಸಾಧ್ಯವಾಗದೆ…ಅವಳ ವಿವಾಹ ಪರ ಪುರುಷನೊಂದಿಗೆ ಆಗುತ್ತದೆ..ಇದರಿಂದ ನೊಂದ ಅರವಸು ಎಲ್ಲರ ಮುಂದೆ ಏಳು ವರ್ಷದಿಂದ ಯಾಗ ಮಾಡಲು ಕೂತಿದ್ದ ತನ್ನ ಅಣ್ಣ,ಸ್ವತಹ ತಂದೆಯ ಕೊಲೆಗಾರ ಎಂದು ಹೇಳಲು ಹೊರಟಾಗ…ಪರಾವಸು ಅಲ್ಲಿದ್ದ ಸೈನಿಕರಿಗೆ ಹೇಳಿ ಇವನನ್ನು ಹೊಡೆಸಿ ಹೊರಗಟ್ಟುತ್ತಾನೆ,

ವಿಷಯ ಅರಿತ ನಿತ್ತಿಲೆ ಜಾತಿಕಾರನಿಂದ ಸುರಕ್ಷಿತನಾದ ತನ್ನ ಹಳೆಯ ಪ್ರೇಮಿ ಅರವಸುವನ್ನು ಕಾಣಲು ಮನೆಯಲ್ಲಿ ಯಾರಿಗೂ ಹೇಳದೆ ಬರುತ್ತಾಳೆ,ಅವರಿಬ್ಬರ ಸಮಾಗಮ ಅರವಸುವಿಗೆ ಖುಷಿ ಉಂತುಮಾಡುತ್ತದಾದ್ರು,ನಿತ್ತಿಲೆ ಈಗಾಗಲೇ ಮದುವೆಯಾಗಿ ಬಿಟ್ಟಿದ್ದರಿಂದ ಪ್ರಿಯತಮನನ್ನು ನಾವಿಬ್ಬರು ಅಣ್ಣ ತಂಗಿಯಾಗಿ ಇರೋಣ ಎನ್ನುತ್ತಾಳೆ.ನಿತ್ತಿಲೆ ಗಂಡ ಹಾಗು ಮಾವನಿಗೆ ಇವಳು ಇದ್ದ ಜಾಗ ತಿಳಿದು ಅವಳನ್ನು ಕೊಂದುಬಿಡುತ್ತಾರೆ..ಇದರಿಂದ ನೊಂದ ಅರವಸು ತಾನು ಸಾಯಲು ಮುಂದಾಗುತ್ತಾನೆ.ಆಗ ಇಂದ್ರ ದೇವ ಪ್ರತ್ಯಕ್ಷನಾಗಿ ವರ ಕೇಳುವಂತೆ ಹೇಳುತ್ತಾನೆ.ಆಗ ಅರವಸು ನಿತ್ತಿಲೆಯನ್ನು ಬದುಕಿಸಲು ಹೇಳುತ್ತಾನೆ,ಆಗ ಇಂದ್ರ ಹೇಳುತ್ತಾನೆ ಅವಳನ್ನು ಬದುಕಿಸ ಬೇಕಾದರೆ ಕಾಲ ಹಿಂದೆ ಹೋಗಬೇಕಾಗುತ್ತದೆ,ಮತ್ತೆ ತನ್ನ ಅಣ್ಣ,ಅಪ್ಪನಂತಹ ವಿಕೃತ ಜೀವಿಗಳ ಸೃಷ್ಟಿಯಾಗಿ ಗೊಂದಲವಾಗುತ್ತದೆ ಎಂಬ ವಾಸ್ತವ ತಿಳಿಸುತ್ತಾನೆ.ನಮ್ಮನ್ನು ಕಾಡಿದ ಸನ್ನಿವೇಶ ಇದು,ಬಹಳ ಸುಂದರವಾಗಿ ಮೂಡಿ ಬಂತು,ಪ್ರತಿಯೊಬ್ಬನಿಗೂ ಬದುಕಿಗೆ ಇಂತಹ ಗೊಂದಲಗಳು ಉಂಟಾದಾಗ,ನಾವು ಸಿಲುಕುವ ಪೇಚಾಟಗಳನ್ನು ಹಾಗು ಅಂತಹ ಆಂತರ್ಯದ ಘರ್ಷಣೆಗಳಿಂದ ಹೊರಬರಲು ತೆಗೆದುಕೊಳ್ಳಬೇಕಾದ ಸೂಕ್ತ ನಿರ್ಧಾರದ ಕ್ಷಣಗಳು ತುಂಬಾ ಜಿಗುಪ್ಸೆಯನ್ನು ಉಂಟುಮಾಡುತ್ತದೆ.ಅದೇ ಈ ನಾಟಕದಲ್ಲೂ ಆಗಿದ್ದು…ಕೊನೆಗೆ ತನ್ನ ತಂದೆ ರೆಭ್ಯ ಮುನಿಯಿಂದ ಸೃಷ್ಟಿಯಾಗಿದ್ದ ಬ್ರಹ್ಮ ರಾಕ್ಷಸನಿಗೆ ಮುಕ್ತಿ ಕೊಟ್ಟುಬಿಡು ಎಂದು ವರ ಕೇಳಿ..ಅರವಸು ನಿತ್ತಿಲೆಯ ಪಕ್ಕದಲ್ಲೇ ಸಾವಿಗೆ ಶರಣಾಗುತ್ತಾನೆ ..ಇತ್ತಕಡೆ ರಾಕ್ಷಸನಿಗೆ ಮುಕ್ತಿ ಸಿಕ್ಕಿ…ಬರಗಾಲವಿದ್ದ ಜಾಗದಲ್ಲಿ ಮಳೆಯಾಗುತ್ತದೆ…ಜನ ಹರ್ಶೋಲ್ಲಾಸದಿಂದ ಕುಣಿಯುತ್ತಾರೆ.ಎಂಬಲ್ಲಿಗೆ ನಾಟಕ ಮುಗಿಯುತ್ತದೆ.

ಪೂರ್ತಿ ಕೃತಿ ಹೇಳುವುದು ಲೌಕಿಕ ಬದುಕಿನ ಅಹಂ ಸಂಘರ್ಷಗಳು,ಅದರ ಮಧ್ಯೆ ನಿತ್ತಿಲೆಯಂತಹ ಉತ್ಸಾಹದ ಚಿಲುಮೆಯಿಂದ ಮಿಳಿತಗೊಂಡು ಮಳೆಯ ನಿರೀಕ್ಷೆ..ಅವರಿಬ್ಬರ ನಿರಭ್ರ ಪ್ರೇಮ,ಶುದ್ಧ ಪ್ರೀತಿ ಬದುಕಿನ ತೊಳಲಾಟಗಳಲ್ಲಿ ಬೇಯುತ್ತಿರುವ ಸಾಮಾನ್ಯ ಜೀವಿಗಳಿಗೆ ಮಳೆ ಎಂಬ ಮಹತ್ವಾಕಾಂಕ್ಷೆ ಕೊಡುವ ಮುದ ಭಾವ…ಅರೆಕ್ಷಣದ ಆನಂದ.

ನಾಟಕದುದ್ದಕ್ಕೂ production ಅಚ್ಚುಕಟ್ಟಾಗಿ ಬಂದಿದೆ,ಪ್ರತಿಯೊಬ್ಬ ಪಾತ್ರಧಾರಿಯನ್ನು ಮಂಡ್ಯ ರಮೇಶ್ ಹದವಾಗಿ ಪಳಗಿಸಿಬಿಟ್ಟಿದ್ದಾರೆ ,ಅವರೊಬ್ಬ ಸಮರ್ಥ ಗುರು ಎಂಬುದು ಪಾತ್ರಧಾರಿಗಳ ಅಭಿನಯದಿಂದ ಕಾಣುತ್ತದೆ,ನಾಟಕದ ರಂಗ ವಿನ್ಯಾಸ perfect,ವಸ್ತ್ರವಿನ್ಯಾಸ ಸೂಕ್ತವಾಗಿತ್ತು,ಅರುಣ್ ಮೂರ್ತಿ ರವರ ಬೆಳಕು ಕೂಡ ತುಂಬಾ ಗಮನ ಸೆಳೆಯಿತು .ಸಂಗೀತ ಕೂಡ fabulous..ಸಂದರ್ಭಕ್ಕೆ ತಕ್ಕಂತೆ ಅಳವಡಿಸಿದ್ದ ವೇದ ಹಾಗು ಋಕ್ಕುಗಳು ಕೇಳಲು ಮುದವಾಗಿತ್ತು..

ಇದೊಂದು ಪರಿಪೂರ್ಣ ನಾಟಕ ಎನ್ನುವುದಕ್ಕೆ ನಮಗೆ ಒಂಚೂರು clarity ಬೇಕಾಗಿತ್ತು.

ನಿರ್ದೇಶಕ ಮಂಡ್ಯ ರಮೇಶ್ ಹೇಳಿದ ಹಾಗೆ ಸಣ್ಣ ಪುಟ್ಟ ಹಳ್ಳಿಗಳಲ್ಲಿ ಕೂಡ ಈ ನಾಟಕವನ್ನು ಆಡಿದ್ದರಿಂದ ಮತ್ತು ಸಾಮಾನ್ಯ ಪ್ರೇಕ್ಷಕನನ್ನು ಕೂಡ ಇದು ತಲುಪಬೇಕಾದ್ದರಿಂದ ಸರಳೀಕೃತಗೊಳಿಸಿದ್ದೇವೆ ಎಂದು ಹೇಳಿದ್ದರು ಹಾಗಾಗಿಯೇ ಮೂಲ ಕೃತಿಯನ್ನು ಓದಿಕೊಂಡಾಗ ನಾಟಕದ ಕೆಲವು ಪಾತ್ರಗಳು ಮೂಲಕೃತಿಯ ಬಿಗಿಯನ್ನು ಕಾಯ್ದುಕೊಂಡಂತೆ ಕಾಣಲಿಲ್ಲ,ತುಂಬಾ ಮುಖ್ಯ ವಿಚಾರಗಳು ಹಾಸ್ಯಾಸ್ಪದವೆಂಬಂತೆ ಕಾಣುತಿತ್ತು,ಹಾಸ್ಯಕೆಲವೊಮ್ಮೆ ಗಂಭೀರವಾಗಿ ಕಾಣುತ್ತಿತ್ತು,ಕಾರ್ನಾಡರ ಬ್ರಹ್ಮ ರಾಕ್ಷಸನ ಪಾತ್ರ ಈ ನಾಟಕದಲ್ಲಿ ವ್ಯತಿರಿಕ್ತ ಹಾಗು ಸಭ್ಯ ಅನ್ನಿಸಲಿಲ್ಲ,ಕೆಲವು ಡಯಾಲೋಗ್ ಗಳು overlap ಆಗುತ್ತಿತ್ತು,ಒಬ್ಬ ಪಾತ್ರಧಾರಿ ಹೇಳಿ ಮುಗಿಸುವ ಮುನ್ನವೇ ಇನ್ನೊಬ್ಬ ಶುರುಮಾಡಿಬಿಡುತ್ತಿದ್ದ… ಆದರಿಂದ ವಿಷಯ ಅಪೂರ್ಣವಾಗಿತ್ತು..ಇಷ್ಟು ಬಿಟ್ಟರೆ ರಮೇಶ್ ಒಬ್ಬ perfect ನಿರ್ದೇಶಕ ಎನ್ನುವುದರಲ್ಲಿ ಬೇರೆ ಮಾತಿಲ್ಲ..

ಕೃಪೆ : ಅವಧಿ

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s