ಉದ್ಯೋಗ-ನಿರುದ್ಯೋಗ ಮತ್ತು ಹಪಾಹಪಿತನ !

ಈ ದೇಶದಲ್ಲಿ ಯಾಕೆ ಹೆಚ್ಚಾಗಿ ನಿರುದ್ಯೋಗ ಸಮಸ್ಯೆ ತಲೆದೋರುತ್ತದೆ ಎಂದರೆ, ಒಂದು ಕಡೆ ಉದ್ಯೋಗ ಮಾಡುತ್ತಿರುವವರು ಮತ್ತೊಂದು ಕಡೆಯೂ ಆಕಾಂಕ್ಷಿಯಾಗಿರುತ್ತಾರೆ. ಮಂದಿಯ ಅನ್ನವನ್ನು ಕಸಿದುಕೊಳ್ಳುವವರೇ ಈ ದೇಶದಲ್ಲಿ ಹೆಚ್ಚಾಗಿರುವಾಗ ಮತ್ತು ಎಲ್ಲವೂ ತಮಗೇ ಸಿಗಬೇಕು ಎನ್ನುವ ಹಠಮಾರಿತನದ ಕಾರಣವಾಗಿ ಹುದ್ದೆಗಳ ಸೃಷ್ಟಿಯಾಗುತ್ತಿದ್ದರೂ, ಅವುಗಳಿಗೆ ಉದ್ಯೋಗದಲ್ಲಿರುವವರೇ ಮತ್ತೇ ಬರುತ್ತಾರೆ. ಅವರಿದ್ದ ಉದ್ಯೋಗವೂ ಖಾಲಿಯಾಗುತ್ತದೆ ; ಆ ಹುದ್ದೆಯ ಭರ್ತಿಗೆ ಕಾಲ ಕೂಡಿ ಬರುವುದೇ ಇಲ್ಲ. ಸರಕಾರಗಳು ಈ ಬಗ್ಗೆ ಹೆಚ್ಚಿನ ವಿಚಾರ ಮಾಡಿ ಸೂಕ್ತವಾದ ಕಾಯ್ದೆ ಮಾಡಬೇಕು ಎಂದೇನೂ ನಮ್ಮ ಆಪೇಕ್ಷೆ ಇಲ್ಲ. ಆದರೆ ಉದ್ಯೋಗ ನೀಡುವವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಅನ್ನವಿಲ್ಲದವರಿಗೆ ಅನ್ನ ನೀಡುವ, ಬದುಕು ಇಲ್ಲದವರಿಗೆ ಬದುಕು ನೀಡುವ ಪರಿಕ್ರಮವನ್ನು ತಮ್ಮದಾಗಿಸಿಕೊಳ್ಳಬೇಕು ಎಂಬುದು ನಮ್ಮ ಮನವಿಯಾಗಿದೆ. ಉಳ್ಳವರಿಗೇ ಮಣೆ ಹಾಕುವ ಈ ದೇಶದಲ್ಲಿ ಅದು ಸಾಧ್ಯವೇ ?

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s