ನಾನೊಂದು ದಿನ ದೇವರಿಗೆ ನಿನ್ನವ್ವನ ಹಡಾ ಎಂದು ಬೈದೆ !

ನಾನೊಂದು ದಿನ ದೇವರಿಗೆ
ನಿನ್ನವ್ವನ ಹಡಾ ಎಂದು ಬೈದೆಆತ ಫಕ್ಕೆಂದು ನಕ್ಕ

ನೆರೆಮನೆಯ ಬೋರು ಬಹಾದ್ದೂರ್ ಕಂಗಾಲಾಗಿ
ಹರಳೆಣ್ಣೆ ಕುಡಿದವನಂತೆ ಮುಖ ಮಾಡಿ
“ಏನೋ ಮಾರಾಯಾ ನೀನು ಆ ನಿರ್ಗುಣ ನಿರಾಕಾರ

ಅನಾಥ ಜಗನ್ನಾಥನಿಗೆ ಹೀಗೇಕೆ

ವಿನಾಕಾರಣ ಬೈಯುತ್ತಿ” ಎಂದು ಕೇಳಿದ
ಇನ್ನೊಮ್ಮೆ ನಾನು ಬೈದೆ

ಯುನಿವ್ಹರ್ಸಿಟಿಯ ಕಟ್ಟಡ ಸೊಂಟದವರೆಗೆ
ಕುಸಿದು ಬಿದ್ದಂತಾಯಿತು
ನನ್ನ ಬೈಗುಳದ ಬಗ್ಗೆ ಹಾಗೂ
ಮನುಷ್ಯನಿಗೇಕೆ ಸಿಟ್ಟು ಬರುತ್ತದೆಂಬುದರ ಬಗ್ಗೆ

ಅಲ್ಲೀಗ ರೀಸರ್ಚ್ ನಡೆದಿದೆಯಂತೆ

ನನ್ನ ಹುಟ್ಟುಹಬ್ಬದ ದಿನ ಮತ್ತೆ
ನಾನು ದೇವರಿಗೆ ಬೈದೆ
ಇನ್ನಷ್ಟು ಮತ್ತಷ್ಟು
ಬೈಗುಳಗನ್ನು ಬೈದೇ ಬೈದೆ

“ಮಗನೇ ತುಂಡು ರೊಟ್ಟಿಗಾಗಿ ಎಂದಾದರೂ
ನೀನು ಚಕ್ಕಡಿ ತುಂಬ ಕಟ್ಟಿಗೆ ಒಡೆದಿದ್ದಿಯಾ ?
ಚಿಂದಿ ತೊಟ್ಟ ಅವ್ವನ ಮಾನವನ್ನು
ಎಂದಾದರೂ ನೀನು ಕಾಯ್ದಿದ್ದಿಯಾ ?
ಅಪ್ಪನಿಗೆ ಬೇಕಾಗುವ ಬೀಡಿಯನ್ನು
ಎಂದಾದರೂ ನೀನು ತಂದುಕೊಟ್ಟಿದ್ದೀಯಾ ?
ಅವನಿಗೆ ಬೇಕಾದ ಶೆರೆಗಾಗಿ
ಎಂದಾದರೂ ಚಮಚಾಗಿರಿ ಮಾಡಿದ್ದೀಯಾ ?

ಇಂಪಾಸಿಬಲ್ ; ನಿನಗಿದು ಅಸಾಧ್ಯ
ಅದಕ್ಕೆ ಬೇಕು ; ಅವಮಾನಿತವಾದ ಬದುಕು
ಎಲ್ಲರಿಂದ ‘ಛೀ’ ‘ಥೂ’ ಅನ್ನಿಸಿಕೊಳ್ಳುವಂಥ ಜೀವನ
ಮಣ್ಣಿನ ಜೊತೆ ಮಣ್ಣಾಗಿ ದುಡಿಯುವ
ನನ್ನ ಅವ್ವನಂಥ ಅವ್ವ
ಇವುಗಳಲ್ಲಿ ಯಾವುದೂ ಅವನಿಗಿಲ್ಲದಿದ್ದುರಿಂದ
ನಾನೊಂದು ದಿನ ದೇವರಿಗೆ
ನಿನ್ನವ್ವನ ಹಡಾ ಎಂದು ಎಲ್ಲರೆದುರೇ ಬೈದೆ !

                                ಮೂಲ ಮರಾಠಿ : ಕೇಶವ ಮೇಶ್ರಾಮ
                                ಕನ್ನಡಕ್ಕೆ : ಡಾ. ಸರಜೂ ಕಾಟ್ಕರ್
Advertisements

2 responses to “ನಾನೊಂದು ದಿನ ದೇವರಿಗೆ ನಿನ್ನವ್ವನ ಹಡಾ ಎಂದು ಬೈದೆ !

  1. sir nijakku naanu kuda heenga baita irtini,, but nammavva nanga baitaa irtaalu, maneyaliiro andhakaaravanella kittu horage bisaaduva dhyarya but nannavva hale kaaladavalu addi maduttale,

    • ಮೌಢ್ಯಗಳನ್ನು ಅಷ್ಟು ಬೇಗ ಕಿತ್ತಿ ಹಾಕಲು ಆಗುವುದಿಲ್ಲ ನಾಗೇಶ. ಆದರೂ ನಮ್ಮ ಪ್ರಯತ್ನ ನಿರಂತರವಾಗಿರಲಿ. ಅವ್ವ ಬೈಯ್ಯುತ್ತಾಳೆ ಅನ್ನೋದು ಸರಿಯಲ್ಲ ; ಅದು ಅವರ ದಾರಿ ; ಮುಂದಿನ ನಮ್ಮ ಪೀಳಿಗೆಯನ್ನು ಬದಲಾವಣೆ ಮಾಡಲು ಸಾಧ್ಯವಿದೆಯೇನೋ ನೋಡಬೇಕು. ದಲಿತ ಕವಿ ಸಿದ್ಧಲಿಂಗಯ್ಯ ಅವರ ಬಗ್ಗೆ ಚರ್ಚೆ ಆಗುತ್ತ ಇರುವುದು ಇದೇ ಕಾರಣದಿಂದ. ಆ ಕುರಿತು ಈ ಬ್ಲಾಗಿನಲ್ಲಿ ಹಾಗೂ ಫೇಸ್ ಬುಕ್ ನಲ್ಲಿ ಲೇಖನ ಇವೆ ನೋಡಿ.

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s