ಯಾರಾದ್ರೂ ನಮ್ ಬಿಜೆಪಿ ಪಾರ್ಟಿನ ಬೋದ್ರೆ ನಾನ್ ಸುಮ್ಮನೆ ಇರಲ್ಲ.. !

ಯಾರಾದ್ರೂ ನಮ್ ಬಿಜೆಪಿ ಪಾರ್ಟಿನ ಬೋದ್ರೆ ನಾನ್ ಸುಮ್ಮನೆ ಇರಲ್ಲ.. ಏನ್ರೀ ಅಂಥದ್ದು ಯಾರೂ ಮಾಡದೆ ಇರೋದು ನಮ್ಮೋರು ಮಾಡಿರೋದು.. ಹಾಲಪ್ಪ ಫ್ರೆಂಡ್ ಹೆಂಡತೀ ಮೇಲೆ ಅತ್ಯಾಚಾರ ಮಾಡಿದ.. ಏನ್ ಜಗತ್ತೆಲ್ಲೂ ಅತ್ಯಾಚಾರನೇ ಆಗಲ್ವಾ.. ಏನೋ ನಮ್ ರೇಣುಕ ನರ್ಸ್ ಚೆನಾಗಿದಾಳಲ್ಲ ಅಂತ ಮುತ್ ಕೊಟ್ಟಿದ್ದು ದೊಡ್ಡ ತಪ್ಪಾ..? ಭಾರತಾಂಬೆಯ ನೆಲವನ್ನು ಕಂಡಕಂಡವರಿಗೆ ಸುಳ್ಳುದಾಖಲೆ ಸೃಷ್ಟಿಸಿ ಕಟ್ಟಾ ಜಗ್ಗ ಕೊಟ್ಟನಪ್ಪ.. ನಮ್ ದೇಶಾನ ನಾವ್ ಮಾರಕಂಡು ತಿನ್ನದೆ ಇನ್ನೇನು ಉಗಾಂಡದೋರು ಮಾರಬೇಕ? ಬಳ್ಳಾರಿ ಗಣಿ ಅಂತರೆ.. ಭೂಮಿತಾಯಿ ನಮ್ಮ ಆಸ್ತಿ,ಅದನ್ನ ಕಂಡಾಪಟ್ಟೆ ಸುಲಿಗೆ ಮಾಡಿದ್ದು ತಪ್ಪ ? ಮೆಡಿಕಲ್ ಕಾಲೇಜಿಗೆ ಸೀಟ್ ಕೊಡಕ್ಕೆ ಲಂಚ ತಗಂಡನಪ್ಪ ರಾಮಚಂದ್ರೇಗೌಡ.. ಏನ್ ನೀವ್ಯಾರೂ ಮೋಸನೇ ಮಾಡಲ್ವಾ.. ರೆಡ್ಡಿಗಳು ಹೋಗಿ ಚಂಚಲಗುಡ ಜೈಲಲ್ಲಿ ಹಳಸಿದ ಮುದ್ದೆ ಮುರಕಂಡು ಕುಂತಿರೋದು ನಮಗೆಷ್ಟು ನೋವಾಗ್ತಾ ಇದೆ ಗೊತ್ತ.. ನಮ್ ಮುಖ್ಯಮಂತ್ರಿನೇ ನಾಚಿಕೆ ಮಾನ ಮರ್ಯಾದೆ ಇಲ್ಲದಂಗೆ ಜೈಲಿಗೋಗಿ ಬಂದನಪ್ಪ.. ಗಾಂಧಿತಾತ ಅದೆಷ್ಟು ಸಲ ಹೋಗಿ ಬಂದಿಲ್ಲ.. ಸುಮ್ ಸುಮ್ಮನೆ ಹಂಗೆಲ್ಲ ನಮ್ ಬಿಜೆಪಿ ಲಂಗೋಟಿನ ಎಳೀಬಾರದು ನೋಡಿ.. ಉಳಿದಿರೋದು ಅದೊಂದೇ.. ಅದನ್ನೂ ನೀವ್ ಕಿತಗಂಡ್ರೆ ನಾವ್ ಬಿಜೆಪಿಯೋರು ಕೆರೆಗೋ ಬಾವಿಗೋ ಹೋಗಿ ಬೀಳಬೇಕಾಯ್ತದೆ.. ಬಿಜೆಪಿನ ಬೈಯಬೇಡಿ ಪ್ಲೀಸ್..

                                                                                                     ಕವಡೆ ಶಾಸ್ತ್ರದ ಚಿನ್ನಪ್ಪ
                                                                                                    By: Dayanand TK
Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s