ವಿಧಾನ ಸೌಧದಲ್ಲಿ ಅಶ್ಲೀಲ ಚಿತ್ರ !

 

ಬೆಂಗಳೂರು, ಫೆ. 7: ರಾಜ್ಯದ ಘನವೆತ್ತ ಸಚಿವರೊಬ್ಬರು ವಿಧಾನಸೌಧದಲ್ಲಿ ಕಲಾಪ ನಡೆಯುತ್ತಿರುವ ಸಂದರ್ಭದಲ್ಲಿ ತಮ್ಮ ಸೀಟಿನಲ್ಲಿ ಕುಳಿತು ಬ್ಲೂಫಿಲಂ ನೋಡಿದ ಘಟನೆ ಇಂದು ನಡೆದಿದೆ. ಸಹಕಾರ ಸಚಿವ ಲಕ್ಷಣ ಸವದಿ ಅವರು ಇಂತಹ ನಾಚಿಕೆಗೇಡಿನ, ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಕೆಲಸವನ್ನು ಮಾಡಿದ್ದಾರೆ.

ತಮ್ಮ ಮೊಬೈಲ್ ಫೋನಿನಲ್ಲಿ ಇಂತಹ ನೀಲಿ ಚಿತ್ರವನ್ನು ಸುಮಾರು 5 ನಿಮಿಷಗಳ ಕಾಲ ನೋಡಿ ಆನಂದಿಸುತ್ತಾ, ತಮ್ಮ ತೆವಲನ್ನು ತೀರಿಸಿಕೊಂಡ ಹೇಯ ಘಟನೆ ನಡೆದಿದೆ. ಸದನದಲ್ಲಿ ಗಂಭೀರ ಚರ್ಚೆ ನಡೆಯುತ್ತಿರುವಾಗ ಕೈಯಲ್ಲಿ ಮೊಬೈಲ್ ನೋಡುತ್ತಾ ಅವರು ಇಂತಹ ಅಸಹ್ಯಕರ ಚಿತ್ರವನ್ನು ನೋಡಿದ್ದಾರೆ.

ನೀತಿ ಬಗ್ಗೆ ಮಾತಾಡಿ

ಪಟ್ಟ ಕಟ್ಟಿಕೊಂಡವರು
ನೇತಿ ಎನ್ನುವ ಕುಹಕಿಗಳು

ಎನ್ನೋದು ಗೊತ್ತಿರಲಿಲ್ಲ !
ರೇವು ಪಾರ್ಟಿಗೆ ನಮಗೂ ಅವಕಾಶ

ಕೊಡಿ ಎಂದು ಕೇಳುವವರಲ್ಲ ನಾವು ;
ನಿಮ್ಮ ನೀಲಿ ಚಿತ್ರಗಳ ಸರಬು

ನಮಗೂ ಇರಲಿ ಎಂದು

ಹಲ್ಲು ಗಿಂಜೋರು ನಾವಲ್ಲ !
ನಾವು ನಿಮ್ಮನ್ನು ನಮ್ಮನ್ನಾಳಲಿ

ಎಂದು ಕಳಿಸಿದವರಲ್ಲ !
ನಾವು ಹಾಕಿದ ಮತದಿಂದಲೇ

ಮತ್ತೇರಿದ ಮೇಲೆ

ನೀವು ಕೆಳಗಿಳಿಯುವರೆಗೂ

ನಮ್ಮ ಧ್ವನಿ ನಿಲ್ಲೋದಿಲ್ಲ !

ಸ್ವಾಮಿ ನೀವು ಕುಳಿತುಕೊಂಡಿದ್ದು  

ಸ್ವಂತ ಸೌಧವಲ್ಲ ; ವಿಧಾನಸೌಧ !

Advertisements

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s