ತರ್ಕಕ್ಕೆ ಸಿಗದ ತರ್ಕ: ಇತಿಹಾಸದಲ್ಲೊಂದು ವಿಚಿತ್ರ ಕೇಸು !

ಶ್ರೀಧರ್ ಬಂಡ್ರಿ, ಹೈದರಾಬಾದು

ಹಲವಾರು ವರ್ಷಗಳ ಹಿಂದೆ ಒಬ್ಬ ನ್ಯಾಯಶಾಸ್ತ್ರದ ಗುರುವಿದ್ದ, ಅವನಿಗೊಮ್ಮೆ ಒಬ್ಬ ಶಿಷ್ಯ ಎದುರಾದ. ಆ ಶಿಷ್ಯನ ಸಮಸ್ಯೆಯೇನೆಂದರೆ ಅವನಿಗೆ ನ್ಯಾಯಶಾಸ್ತ್ರ ಕಲಿಯಲು ಇಚ್ಛೆಯಿತ್ತು ಆದರೆ ಅವನ ಬಳಿ ಗುರುವಿಗೆ ಕೊಡಬೇಕಾದ “ಶಿಕ್ಷಣ ಶುಲ್ಕ”ದ ಹಣವಿರಲಿಲ್ಲ. ಆಗ ಅವನು ಗುರುವಿನೊಡನೆ ಒಂದು ಒಪ್ಪಂದ ಮಾಡಿಕೊಂಡ. ಅದೇನೆಂದರೆ, ತಾನು ನ್ಯಾಯಾಲಯದಲ್ಲಿ ತನ್ನ ಪ್ರಥಮ ದಾವೆಯನ್ನು ಗೆದ್ದ ದಿವಸ ಅವರಿಗೆ ಕೊಡಬೇಕಾದ ಶುಲ್ಕವನ್ನು ಕೊಡುತ್ತೇನೆಂಬುದಾಗಿ.
ಸರಿ, ಅದರಂತೆ ಒಪ್ಪಂದ ಕುದುರಿದ ಮೇಲೆ ಆ ಶಿಷ್ಯನ ವಿದ್ಯಾಭ್ಯಾಸ ಈ ನ್ಯಾಯಶಾಸ್ತ್ರದ ಗುರುವಿನ ಬಳಿಯಲ್ಲಿ ಸಾಗಿತು. ವಿದ್ಯಾಭ್ಯಾಸ ಮುಗಿದ ನಂತರ ಗುರುವು ತನ್ನ ಶುಲ್ಕಕ್ಕಾಗಿ ಆ ಶಿಷ್ಯನನ್ನು ಪೀಡಿಸ ತೊಡಗಿದ. ಆಗ ಆ ವಿದ್ಯಾರ್ಥಿ ತಾವು ಮಾಡಿಕೊಂಡ ಕರಾರನ್ನು ಜ್ಞಾಪಿಸಿ ಗುರುವಿಗೆ ಕೊಡಬೇಕಾದ ಶುಲ್ಕವನ್ನು ಸಲ್ಲಿಸಲು ನಿರಾಕರಿಸಿದ. ಆಗ ಇದರಿಂದ ಕುಪಿತಗೊಂಡ ಗುರು ಆ ಮೊಂಡು ವಿದ್ಯಾರ್ಥಿಯ ಮೇಲೆ ಕೋರ್ಟಿನಲ್ಲಿ ದಾವೆ ಹೂಡಲು ನಿರ್ಧರಿಸಿದ; ಆಗ ಅವರಿಬ್ಬರೂ ನ್ಯಾಯಾಲಯದಲ್ಲಿ ತಾವೇ ಸ್ವತಃ ತಮ್ಮ ತಮ್ಮ ವಾದವನ್ನು ಮಂಡಿಸಲು ನಿರ್ಧರಿಸಿದರು.
ಗುರುವು ತನ್ನ ವಾದ ಮಂಡನೆಯನ್ನು ಹೀಗೆ ಮುಂದಿಟ್ಟ, “ಒಂದು ವೇಳೆ ತಾನು ನ್ಯಾಯಾಲಯದಲ್ಲಿ ಗೆದ್ದುದೇ ಆದರೆ, ಆ ವಿದ್ಯಾರ್ಥಿ ನ್ಯಾಯಾಲಯದ ನಿಯಮಾವಳಿಯ ಪ್ರಕಾರ ತನಗೆ ಬಾಕಿಯಿರುವ “ಶಿಕ್ಷಣ ಶುಲ್ಕ”ವನ್ನು ಕೊಡಬೇಕಾಗುತ್ತದೆ; ಒಂದು ವೇಳೆ ತಾನು ಸೋತರೆ ತಮ್ಮ ನಡುವೆ ಮಾಡಿಕೊಂಡ ಒಪ್ಪಂದದಂತೆ ಆಗಲೂ ಆ ಶಿಷ್ಯ ತನಗೆ ಶುಲ್ಕವನ್ನು ಕೊಡಬೇಕಾಗುತ್ತದೆ ಏಕೆಂದರೆ ಅದು ಅವನು ಗೆದ್ದ ಮೊದಲ ಕಟ್ಲೆಯಾಗುತ್ತದೆ.”
ಆಗ ಆ ಬುದ್ಧಿವಂತ ವಿದ್ಯಾರ್ಥಿ ತನ್ನ ಪ್ರತಿವಾದವನ್ನು ಹೀಗೆಂದು ಮುಂದಿಟ್ಟ, “ಒಂದು ವೇಳೆ ತಾನು ಕೋರ್ಟಿನಲ್ಲಿ ಗೆದ್ದುದೇ ಆದರೆ, ತಾನು ನ್ಯಾಯಲಯದ ನಿಯಮದಂತೆ ಗುರುವಿಗೆ ಶುಲ್ಕ ಕೊಡಬೇಕಾಗಿಲ್ಲ ಏಕೆಂದರೆ ಅದು ತಾನು ಕೊಡದೇ ಇರುವ “ಶಿಕ್ಷಣ ಶುಲ್ಕ”ದ ಬಗ್ಗೆ ಇರುವ ದಾವೆ. ಒಂದು ವೇಳೆ ತಾನು ಸೋತರೆ ಆಗಲೂ ಕೂಡ ತಾನು ಗುರುವಿಗೆ ಶುಲ್ಕ ಕೊಡಬೇಕಾಗಿಲ್ಲ ಏಕೆಂದರೆ ತಮ್ಮ ಕರಾರಿನಂತೆ ಮೊದಲನೆ ಕೇಸಿನಲ್ಲಿ ಗೆದ್ದರೆ ಮಾತ್ರ ತಾನು ಗುರುವಿಗೆ ಶುಲ್ಕ ಕೊಡಬೇಕು!”
ಹೀಗೆ ಚರಿತ್ರಯಲ್ಲಿ ಇದೊಂದು ಬಗೆಹರಿಯದ ಒಗಟಾಗಿ ದಾಖಲಾಗಿದೆ; ವೃಕ್ಷ-ಬೀಜ ನ್ಯಾಯ ಅಥವಾ ಕೋಳಿ ಮತ್ತು ಮೊಟ್ಟೆಯ ಸಮಸ್ಯೆಯಂತೆ. ಯಾರಾದರೂ ಬೇರೆ ರೀತಿಯಲ್ಲಿ ಈ ಸಮಸ್ಯೆಯನ್ನು ಬಗೆಹರಿಸುತ್ತಾರೋ ನೋಡಬೇಕು?

ಕೃಪೆ : ಸಂಪದ

Advertisements

One response to “ತರ್ಕಕ್ಕೆ ಸಿಗದ ತರ್ಕ: ಇತಿಹಾಸದಲ್ಲೊಂದು ವಿಚಿತ್ರ ಕೇಸು !

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s